ಕೊಲಾಮಿನಿಕ್ ಆಮ್ಲ

ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲದ ಬಹುಘಟಕ ಅಥವಾ ಪಾಲಿಮರ್ ಆದ ಕೊಲಾಮಿನಿಕ್ ಆಮ್ಲ ಒಂದು ಹೋಮೋಪಾಲಿಸ್ಯಾಕರೈಡ್. ಎಸ್ಚೆರಿಷಿಯ ಕೋಲಿ ಮತ್ತು ಇತರ ಹಲವು ಸೂಕ್ಷ್ಮಾಣುಜೀವಿಗಳಲ್ಲಿ ಮಾತ್ರ ಈ ಸಂಯುಕ್ತ ಇರುವುದು ಕಂಡುಬಂದಿದೆ. ಇದರ ಜೈವಿಕ ಸಂಶ್ಲೇಷಣೆ (ಬಯೋಸಿಂಥೆಸಿಸ್) ಈ ಮುಂದೆ ತೋರಿಸಿರುವಂತೆ ಆಗುತ್ತದೆಂದು ತಿಳಿದುಬಂದಿದೆ.

ಗ್ಲೂಕೋಸಮೈನ್ -6-ಫಾಸ್ಫೇಟ್
 		(
ಅಸಿಟೈಲ್ ಗ್ಲೂಕೋಸಮೈನ್-6-ಫಾಸ್ಫೇಟ್
(
ಅಸಿಟೈಲ್ ಮ್ಯಾನೋಸಮೈನ್-6-ಫಾಸ್ಫೇಟ್
( 
ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲದ-9-ಫಾಸ್ಪೇಟ್
(
ಎನ್-ಅಸಿಟೈಲ್ ನ್ಯೂರಾಮಿನಿಕ್ ಆಮ್ಲ (ಓಂಓ)
(
ಸೈಟಿಡಿನ್-5'-ಮಾನೋ ಫಾಸ್ಫೋ-ಎನ್-ಅಸಿಟೈಲ್ ನ್ಯೂರಾಮಿ
 ನಿಕ್ ಆಮ್ಲ (ಅಒP-ಓಂಓ)
( 
ಕೊಲಾಮಿನಿಕ್ ಆಮ್ಲ

ಚಿತ್ರ-1

ಅಒP-ಓಂಓ ಸಂಯುಕ್ತ ಕೊಲಾಮಿನಿಕ್ ಆಮ್ಲಕ್ಕೆ ಮಾತ್ರವಲ್ಲದೆ ಓಲಿಗೋ ಸ್ಯಾಕರೈಡುಗಳು, ಗ್ಲೈಕೋಪ್ರೋಟೀನುಗಳು ಮತ್ತು ಗ್ಯಾಂಗ್ಲಿಯೋಸೈಡುಗಳೆಂಬ ಪಾಲಿಸ್ಯಾಕರೈಡುಗಳಿಗೂ ಪೂರ್ವಗಾಮಿ (ಪ್ರೀಕರ್ಸರ್) ಆಗಿದೆ.
(ಕೆ.ಟಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ